Friday, November 19, 2010

ದೂದ್ ಸಾಗರ (Dudhsagar)

ಗೋವಾ ಅಂದರೆ ತಟ್ಟನೆ ನೆನಪಿಗೆ ಬರುವುದು ಕಡಲ ಕಿನಾರೆ ಹಾಗೂ ದೇವತೆಗಳಿಗೂ ಪ್ರೀಯವಾದಂತಾ ಸುರೆ. ಆದರೆ ಇದೆಲ್ಲವನ್ನೂ ಮರೆಯಿಸಿ ಮತ್ತೇರಿಸುವ, ಮೈ ನವಿರೇಳಿಸುವ ಸ್ಥಳ ಇಲ್ಲಿದೆ. ನಾಲ್ಕಾರು ದಿವಸಗಳಿಂದ ಕಡಲ ತೀರಗಳಲ್ಲಿ ತೋರಿಸಿದ ಪರಾಕ್ರಮಗಳೆಲ್ಲಾ ಒಂದು ಕ್ಷಣದಲ್ಲಿ ಮಾಯ! ಆಗ ತಾನೇ ಮುಗಿದ ಜಡಿ ಮಳೆ ಕಚ್ಚಾ ರಸ್ತೆಯನ್ನು ಕೊಚ್ಚೆಬ್ಬಿಸಿ ಆ ಜೀಪ್ ಸಫಾರಿಯನ್ನು ಎಂದೆಂದಿಗೂ ಮರೆಯಲಾಗದಂತೆ ಮಾಡಿತ್ತು. ನೀರು, ನೀರಾ ಹಾಗೂ ನಾರಿಯರ ಸಂಪೂರ್ಣ ಸಮ್ಮಿಲನವಿತ್ತು ಅಲ್ಲಿ.....
Goa is synonym to beaches. But there is this jungle beauty that cleanses the memory from all that one has done over the beaches. Jeep safari of about 10km via muddy track amidst western ghats is not less than what we see in Adventure TV Channels! Human beauties diving and swimming in the water reminds the Goddess being worshiped with colourful flowers.




14 comments:

  1. Good snaps..... how much did you pay to get the last one????

    ReplyDelete
  2. @ Rajesh,
    It is the other way dost. Always one should pay for the professional photographer's service and she did so!

    ReplyDelete
  3. ನಿಸರ್ಗಸೌಂದರ್ಯದ ಚಿತ್ರಗಳು ಚೆನ್ನಾಗಿವೆ.

    ReplyDelete
  4. @ ಸುನಾತ್
    ನೀವು, ಎಲ್ಲವನ್ನೂ ಪ್ರಕೃತಿಯೆಂದು ತಿಳಿದು ಈ ಮಾತು ಹೇಳಿದಿರೋ ಅಥವಾ ಬೇರೆ ಅರ್ಥವಿದೆಯೋ ತಿಳಿಯಲಿಲ್ಲ. ನಾನಂತೂ ಈ ಎಲ್ಲ ಚಿತ್ರಗಳನ್ನು ಪ್ರಕೃತಿಯೆಂದು ತಿಳಿದೇ ಇಲ್ಲಿ ಲಗತ್ತಿಸಿದ್ದೇನೆ. ಬೇರೇನೂ ಉದ್ದೇಶದಿಂದಲ್ಲ. ನಿಮ್ಮ ಮನಸ್ಸಿಗೆ ಇರಿಸು ಮುರಿಸಾಗಿದ್ದರೆ ಕ್ಷಮೆಯಿರಲಿ.

    ReplyDelete
  5. Hi Krishna Bhat.. Nice photography...

    ReplyDelete
  6. Beautiful shots. The water falls is lovely.

    ReplyDelete
  7. ಮೊದಲನೇ ಚಿತ್ರನೋಡಿ ತುಂಬಾ ಖುಷಿ ಆಯ್ತು..ಕೊನೆ ಫೋಟೋ ಸ್ವಲ್ಪ್ ಮುಜುಗರ ತಂತು...ಸೊಗಸಾಗಿ ತೆಗೆದಿದ್ದಿರಿ...

    ReplyDelete
  8. @ Shashi Jois
    ಮೊದಲೇ ಹೇಳಿದ ಹಾಗೆ, ಈ ಎಲ್ಲ ಚಿತ್ರಗಳನ್ನು ಪ್ರಕೃತಿಯೆಂದು ತಿಳಿದೇ ಇಲ್ಲಿ ಲಗತ್ತಿಸಿದ್ದೇನೆ. ಮಹಿಳೆಯನ್ನು ಪ್ರಕೃತಿಗೆ ಹೋಲಿಸುವುದು ತಿಳಿದ ವಿಷಯವೇ ಆಗಿದೆ. ಕೇವಲ ರಸಿಕತೆಯನ್ನು ಬಿಂಬಿಸುವುದಷ್ಟೇ ನನ್ನ ಹಂಬಲವಾಗಿದೆ. ಇತ್ತೀಚಿಗೆ ದಿನಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ ಅಥವಾ ಬೇರಾವುದೇ ಪತ್ರಿಕೆಗಳಲ್ಲಿ ಸ್ವಲ್ಪ ಜಾಸ್ತಿಯಾಗಿಯೇ ಈ ತರಹದ ಚಿತ್ರಗಳು ಚಾಪಿಸಲ್ಪಡುತ್ತವೆ. ನನ್ನ ಬ್ಲಾಗ್ ಗೆಳೆಯರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೋ ಎಂಬ ಅಂಜಿಕೆಯಿಂದಲೇ ಪೋಸ್ಟ್ ಮಾಡಿದೆ. ಎಲ್ಲರೂ ಕಲಾತ್ಮಕವಾಗಿಯೇ ಕಂಡಿದ್ದಾರೆ/ಕಾಣುತ್ತಾರೆ ಎಂದುಕೊಂಡಿದ್ದೇನೆ.

    ReplyDelete
  9. ಎಲ್ಲಾ ಚಿತ್ರಗಳು ಚೆನ್ನಾಗಿವೆ, ನೀವೇ ನೋಡಿದ ಹಾಗೇ ಮಹಿಳೆಯ ಈಥರದ ಚಿತ್ರಗಳು ಎಲ್ಲಾ ಮಾಧ್ಯಮಗಳಲ್ಲಿ ಕಾಣುತ್ತಿರುವುದರಿಂದ ಇದುಮಾತ್ರ ವಿಶೇಷ ಅನಿಸಲಿಲ್ಲ. ಹೀಗಾಗಿ ನಿಮ್ಮಲ್ಲಿ ಒಂದು ಅರಿಕೆ, ಮಾನವ, ಯಂತ್ರ ರಹಿತ ಅಪ್ಪಟ ನಿಸರ್ಗದ ಚಿತ್ರಗಳನ್ನು ಪ್ರಕಟಿಸಿದರೆ ಮನಸ್ಸಿಗೆ ಮತ್ತಷ್ಟು ಖುಷಿಯಾಗುತ್ತದೆ, ನಿಮ್ಮ ಛಾಯಾಗ್ರಹಣ ಪ್ರಕ್ರಿಯೆಗೆ ಶುಭಕೋರುತ್ತೇನೆ, ನಮಸ್ಕಾರ

    ReplyDelete
  10. Hi Bhattre,

    Water Falls pic was amazing.......

    ReplyDelete
  11. ಮೂರು ಮತ್ತು ನಾಲ್ಕನೆ ಚಿತ್ರ ಮನಸ್ಸಿಗೆ ತುಂಬಾ ಮುದ ನೀಡಿತು, ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.. ಧನ್ಯವಾದ...

    ReplyDelete
  12. ನಿಮ್ಮ ಮೂರನೆಯ ಚಿತ್ರ ಚೆನ್ನಾಗಿ ಮೂಡಿ ಬಂದಿದೆ.... ಮನಸಿಗೆ ಮುದ ನೀಡುವ ಚಿತ್ರ ತೆಗೆಯುತೀರಿ. ಮುಂದುವರೆಸಿ, ಇನ್ನೂ ಸುಂದರ ಚಿತ್ರಗಳು ನಾವು ನೊಡುವಂತಾಗಲಿ. ನನ್ನದೂ ಒಂದು ಬ್ಲಾಗ್ ಇದೆ. ಸಾಧ್ಯವಾದತೆ ಓದಿ. www.bannadapukka.blogspot.com.

    ಎಲ್ಲರವ
    ದೇವೇಂದ್ರ ಜೋಶಿ.

    ReplyDelete

ಇವೂ ನಿಮಗೆ ಇಷ್ಟವಾಗಬಹುದು

ಸಂಬಂಧವುಳ್ಳ ಬರಹಗಳು